Power minister D K Shivakumar meets HD Kumaraswamy at his residence in Bengaluru. To get sign for a report about allegation of irregularities in electricity purchase in BJP government.
ಸದನ ಸಮಿತಿ ವರದಿ ಸಹಿಗಾಗಿ ಎಚ್ ಡಿಕೆ ಭೇಟಿ ಮಾಡಿದ ಡಿಕೆಶಿ. ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮನೆಗೆ ಸಚಿವ ಡಿ.ಕೆ.ಶಿವಕುಮಾರ್ ಭೇಟಿ ನೀಡಿದ ವಿಚಾರ ಸುದ್ದಿಗೆ ಗ್ರಾಸವಾಗಿದೆ. ಬೆಂಗಳೂರಿನ ಜೆಪಿ ನಗರದ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿದ ಶಿವಕುಮಾರ್, ರಾಜಕೀಯ ವಿಚಾರ ಏನೂ ಮಾತನಾಡಿಲ್ಲ ಎಂದು ತಿಳಿಸಿದ್ದಾರೆ.ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿದೆ ಎನ್ನಲಾದ ವಿದ್ಯುತ್ ಖರೀದಿ ಹಗರಣದ ಸಂಬಂಧ ಸದನ ಸಮಿತಿಯ ವರದಿ ಅಕ್ಟೋಬರ್ 30ರಂದು ಸಲ್ಲಿಸಬೇಕಿದ್ದು, ಇಂಧನ ಸಚಿವ ಡಿ.ಕೆ.ಶಿವಕುಮಾರ್ ನೇತೃತ್ವದ ಸದನ ಸಮಿತಿ ವರದಿ ಸಲ್ಲಿಸುವ ವೇಳೆ ಎಲ್ಲಾ ಸದಸ್ಯರ ಸಹಿ ಅಗತ್ಯ. ಆದ್ದರಿಂದ ಸಮಿತಿಯ ಸದಸ್ಯರಾದ ಎಚ್.ಡಿ.ಕುಮಾರಸ್ವಾಮಿ ಸಹಿ ಪಡೆಯಲು ತೆರಳಿದ್ದರು.ಈ ಹಿಂದೆ ಸದನ ಸಮಿತಿ ಸದಸ್ಯ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರು. ಆದರೆ ರಾಜೀನಾಮೆ ಅಂಗೀಕಾರವಾಗಿರಲಿಲ್ಲ. ಸದಸ್ಯರಾಗಿ ಎಚ್ ಡಿಕೆ ಮುಂದುವರಿದಿರುವ ಕಾರಣ ವರದಿಗೆ ಸಹಿ ಅಗತ್ಯವಿತ್ತು. ಆದ್ದರಿಂದ ಕುಮಾರಸ್ವಾಮಿ ಮನೆಗೆ ಭೇಟಿ ನೀಡಿ, ಸಹಿ ಪಡೆದರು. ಆ ನಂತರ ಆರೋಗ್ಯದ ಬಗ್ಗೆ ವಿಚಾರಿಸಿದರು ಎಂದು ತಿಳಿದುಬಂದಿದೆ.